If Patra-harittu is the Chlorophyll of Kannada, Green-in-leaf is the Ele-hasiru of English.

by DNS|YB|VS
Hosa Padanerake
(pic: totalkannada.com)
A FEW weeks ago a modern dictionary of English to Kannada words was unraveled to the world. This new dictionary presents words that have been built, not coined; built mostly by common men albeit using highly scientifically studied methods. The dict also reveals these methods to make word building go viral in Kannada.

While words in Kannada today are coined mostly out of nowhere or, as has been found till now, out of Sanskrit sources, words in this book are built using existing parts (roots) and principles of grammar that are both in vogue among common speakers of Kannada. This finds a parallel in medieval English where similar practices have led to foreign coinage of words displacing native ones. Given the original purpose of words to act as pieces that aid in forming a reliable picture of the world around, coined words fare very poorly against their built counterparts.

The word Chlorophyll, for instance, a coined fusion of two Greek words khloros and phyllon is a rather rude puzzle for first time introduction even to native English speakers because it doesn’t use the Englishman’s native words nor does it use his methods of fusing words. However, a simpler English phrase – green-in-leaf – conveying the same meaning is never found in use whereas it ought to be. Likewise for most new words in semi-modern science textbooks.

If that is the fate of English words and English speaking people, the situation in Kannada is even worse. The correlation of object names and concepts to mental pictures in Kannadigas today has to cross not just the hurdle of English, but also cross a higher hurdle of Sanskrit, another language much less understood among Kannadigas. To this effect the patra-harittu found in Kannada textbooks is a tougher candidate to believe to be an equivalent of Chlorophyll. The path shown by this dictionary suggests a plain Kannada alternative, ele-hasiru, that immediately blows the confusion out of Kannada minds and helps people get straight down to business!

This new dictionary re-introduces to Kannadigas their traditional methods of building words from existing roots, prefixes, suffixes & other articles in common use. This dictionary is what Kannadigas need to bridge the gap between chlorophyll and the object it refers to in reality. This dictionary sows seeds of confidence and belief in Kannadiga minds that should make them trust roots from their own language more while building new words. This is the only way Kannadiga community can not only participate well in the new modern world, but also be one of its significant contributors. In fact this is the only way even native Englishmen can participate and contribute more to the modern world!

Gottilla! Gottilla!

To all those "Kannada gottilla" speakers, here's my humblest response to your non-Kannada (especially Hindi) words spoken to me: "GOTTILLA!!"

In fact this approach worked like a magic this morning in my bus. One guy asked me about a bus stop in Hindi and I said the word - GOTTILLA pretty earnestly. After some murmuring and a long pause, the guy spoke again, this time in Kannada, however broken, and I gave a helping response in Kannada with a smile. He smiled too!

This should teach us two lessons - (1) that the people that come into our cities, no matter how fresh their migration is, they do have the capability to speak a few words because they want to make a living here, and (2) that it needs a little friendly, earnest and shrewd force to get those Kannada words out of their brains and mouths. We only need to be smart enough to realize (1) and strong enough to sustain (2)!!

Well this is the way relations can be strengthened. The imposition of Hindi, like a ghost-god that instills fear in the vulnerable, has instilled fear of attracting fellow countrymen's wrath of traitorship. This has made Kannadigas sitting ducks in the fire of Hindi Imposition and they've accommodated themselves to respond in Hindi on the very first utterance of that gottilla word.

In short the subtle negative in gottilla that has been working against us can easily, this way, be converted in our favour.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಬ್ಬಿಂಗ್

ನಿನ್ನೆಗೆ ಬೆಂಗಳೂರಿನಲ್ಲಿ ನಡೆದ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊನೆಗೊಂಡಿತು. ಅದರ ಅಧ್ಯಕ್ಷರಾದ ಜಿ.ವೆಂಕಟಸುಬ್ಬಯ್ಯನವರು ಕೆಲವು ಮುಖ್ಯ ಮತ್ತು ಅತಿ ಮುಖ್ಯ ವಿಷಯಗಳನ್ನು ತಮ್ಮ ಹಲವಾರು ಭಾಷಣಗಳಲ್ಲಿ ಹೊರಹಾಕಿದ್ದಾರೆ. ಅದರಲ್ಲಿ ಒಂದು ಚಿತ್ರಗಳ ಡಬ್ಬಿಂಗ್ ಕುರಿತಾದ ಅವರ ನಿಲುವು ವಿಶೇಷವಾಗಿ ನನ್ನ ಗಮನ ಸೆಳೆಯಿತು. ಏಕೆಂದರೆ ೬+ ಕೋಟಿ ಕನ್ನಡಿಗರ ಭಾಷೆಯಾದ ಕನ್ನಡದ ಸಾಹಿತ್ಯ ಸಮ್ಮೇಳನವೊಂದರಲ್ಲಿ ಅಷ್ಟು ದೊಡ್ಡ ಜನಸಮೂಹದ ಎದುರು ನಿಂದು ಹೀಗೆ ಒಂದು ಜನಾಂಗದ ಮೇಲೆ ಹೇರಿಕೆಯ ಪ್ರವೃತ್ತಿಯನ್ನು ಎತ್ತು ಹಿಡಿಯುವ ಕೆಲಸಕ್ಕೆ ಕೈ-ಜೋಡಿಸಿರುವುದು ನನಗೆ ಅಷ್ಟು ಸರಿಯೆಂದು ಕಾಣಲಿಲ್ಲ.

ಚಿತ್ರ ಡಬ್ಬಿಂಗ್ ಬೇಡವಾದರೆ ಬೇರೆ ಡಬ್ಬಿಂಗ್ ಗಳೂ ಬೇಡ. ಅಲ್ವಾ?
ಜಿ.ವೆಂಕಟಸುಬ್ಬಯ್ಯನವರ ಪ್ರಕಾರ ಪರಭಾಷೆಯಿಂದ ಕನ್ನಡಕ್ಕೆ ಡಬ್ ಮಾಡುವುದು ನಿಲ್ಲಿಸಬೇಕಂತೆ.
(೧) ಮೊದಲಿಗೆ ಡಬ್ಬಿಂಗನ್ನು ತಡೆಯಲು ಯಾರಿಗಾದರು ಹಕ್ಕು ಕೊಟ್ಟವರು ಯಾರು, ಯಾವಾಗ? ಒಂದು ಚಿತ್ರವನ್ನು ಡಬ್ ಮಾಡಬೇಕಾದರೆ ಅದಕ್ಕೆ ಸಂಬಂಧಿಸಿದಂತೆ ಹಕ್ಕು ಕೊಡುವವರು ಕೇವಲ ಆ ಮೂಲ ಚಿತ್ರವನ್ನು ತೆಗೆದವರು. ಡಬ್ಬಿಂಗ್ ಮಾಡದಿರಲು ಹೇಳಲು ಯಾರಿಗೂ ಯಾಕೆ ಹಕ್ಕು ಇದೆ? Censor ಬೋರ್ಡಿನೋರನ್ನು ಬಿಟ್ಟು!!

(೨) ಎರಡನೆಯದಾಗಿ, ಇಂದಿಗೂ ನಮ್ಮ ಎಲ್ಲಾ ಟೀ.ವಿ ವಾಹಿನಿಗಳಲ್ಲಿ ಬರುವ ಜಾಹಿರಾತುಗಳನ್ನು ನೋಡಿ - ಎಲ್ಲವೂ ಬೇರೊಂದು ಭಾಷೆಯಿಂದಲೇ ಡಬ್ ಆಗಿ ಬರುತ್ತವೆ. ಹಾಗಾದರೆ ಈ ಡಬ್ಬಿಂಗುಗಳನ್ನೂ ನಿಲ್ಲಿಸಬೇಡವೇ? ಆದರೆ ಬೇರೆಡೆ ಜಿ.ವೆಂ ಅವರೇ ಹೇಳುವ ಹಾಗೆ ಬೇರೆ ಭಾಷೆಯ ಜಾಹಿರಾತನ್ನು ತಿರಸ್ಕರಿಸಿ, ಕನ್ನಡ ಜಾಹಿರಾತಿಗೆ ಒತ್ತಾಯಿಸಬೇಕಂತೆ. ಇವರ ಮಾತುಗಳನ್ನು ಹೇಗೆ ಅರ್ಥ ಮಾಡಿಕೊಳ್ಳೋದು ಸ್ವಾಮಿ? ಯಾವುದನ್ನು ಸರಿಯೆಂದುಕೊಳ್ಳಬೇಕು, ಯಾವುದನ್ನು ಸರಿಯಲ್ಲವೆಂದು ತೆಗೆದುಕೊಳ್ಳಬೇಕು??

ಬೇಡವೆನ್ನಲು ಕಾರಣವಾದರೂ ಏನು..?
ಡಬ್ಬಿಂಗ್ ಒಂದು ಕಲೆಯಲ್ಲವೆಂದು ಹೇಳುತ್ತಾರೆ ಜಿ.ವೆಂ ಅವರು. ಅದೇ ಕಾರಣದಿಂದ ಅದನ್ನು ನಿಷೇಧಿಸಬೇಕಂತೆ. ಅಂದರೆ ಇವರ ಪ್ರಕಾರ ಚಿತ್ರವೊಂದರಲ್ಲಿ ಕಲೆಯಲ್ಲದ ಯಾವ ಭಾಗವೂ ಇರಕೂಡದು. ಚಲನ ಚಿತ್ರವೊಂದರಲ್ಲಿ ಹಣಕಾಸಿನ ವ್ಯವಹಾರವೂ ಇರುತ್ತದೆ - ಅದನ್ನೂ ನಿಷೇಧಿಸೋಣವೇ? ಹಾಗಂತ ಡಬ್ಬಿಂಗೆನ್ನುವುದು ಕಲೆಯಲ್ಲವೆಂದು ಇಷ್ಟು ಹಗುರವಾಗಿ ಹೇಳಲು ಆಧಾರಗಳಾದರೂ ಏನಿಲ್ಲಿ? ಡಬ್ಬಿಂಗ್ ಅಂದರೆ ಏನು ಎಂದು ಇನ್ನೂ ಸ್ವಲ್ಪ ಕಾಲ ಯೋಚನೆ ಮಾಡಿದ್ದಿದ್ರೆ ಈ ರೀತಿ ಹೇಳುತ್ತಿರಲಿಲ್ಲವೇನೋ ಮಾನ್ಯರು. ಒಂದು ಭಾಷೆಯಲ್ಲಿ ಮಾಡಲಾಗಿರುವ ಚಲನ ಚಿತ್ರವಾಗಲಿ, ಜಾಹಿರಾತೂ ಆಗಲಿ ಸರಿಯಾಗಿ ನೋಡುಗರ ಮನಸ್ಸಿಗೆ ಅಷ್ಟೇ ಸರಿಯಾಗಿ ತಾಗಬೇಕೆಂದರೆ ಅದಕ್ಕೆ ಡಬ್ಬಿಂಗ್ ಮಾಡುವ ತಂಡದವರು ಕಲಾವಿದರಾಗಿಲ್ಲದೇ ಹೋದರೆ ಆಗದು. ಇದನ್ನು ಪರಿಗಣಿಸಬಹುದಾಗಿದೆ ಜಿ.ವೆಂ ಅವರು.

ಕಲೆಯಲ್ಲದಿದ್ದರೂ...
ಡಬ್ಬಿಂಗ್ ಒಂದು ’ಕಲೆ’ಯಲ್ಲದಿದ್ದರೂ ಅದು ಯಾವ ಕಲೆಯ ಉನ್ನತ ರೂಪ ಇಂದು ಕನ್ನಡ ಚಲನಚಿತ್ರೋದ್ಯಮದಲ್ಲಿ, ಕನ್ನಡ ಜಾಹಿರಾತಿನ ಉದ್ಯಮದಲ್ಲಿ ಇಲ್ಲವೋ, ಮತ್ತದರಿಂದ ಕನ್ನಡಿಗ ಚಿತ್ರ-ನೋಡುಗರು ಯಾವ ಕೊರತೆ ಅನುಭವಿಸುತ್ತಿರುವರೋ, ತಾತ್ಕಾಲಿಕವಾಗಿ ಆ ಕೊರತೆಯನ್ನು ತುಂಬುವ ಕೆಲಸವನ್ನಾದರು ಡಬ್ಬಿಂಗ್ ಮಾಡಬಹುದಾಗಿದೆ. ಕಲೆ ಮತ್ತು ಕಲಾವಿದರ ಗುರಿ ಕಲಾನುಭವಿಗಳ ಸುಖವೇ ಆಗಿದ್ದರೆ ಡಬ್ಬಿಂಗ್ ಅನ್ನು ಹೀಗೆ ವಿರೋಧಿಸುವುದಿಲ್ಲ. ಅದನ್ನು ಅಷ್ಟು ಕೇವಲವಾಗಿ ಅಂದು ಮಾತನಾಡುವುದು ಉನ್ನತ ಸ್ಥಾನವನ್ನು ಅಲಂಕರಿಸಿರುವ ಜಿ.ವೆಂ ಅವರಿಗಂತೂ ಖಂಡಿತವಾಗಿಯೂ ಸರಿಹೊಂದಲ್ಲ ಅಂತ ನನ್ನ ಭಾವನೆ. ಚಿತ್ರ ನೋಡುಗರು ಡಬ್ ಆದ ಚಿತ್ರವನ್ನು ಬಿಡುಗಡೆಗೊಳಿಸಿದರೆ ನೋಡುತ್ತಾರೋ ಇಲ್ಲವೋ ಎಂಬ ಮುಖ್ಯ ಪ್ರಶ್ನೆಯನ್ನೇ ಕೇಳಿಕೊಳ್ಳದೇ ಈ ರೀತಿ ಒಂದು ಕಲೆಯೂ ಆಗಿರುವ ಉದ್ಯಮದ ಮೇಲೆ ಹೀಗೆ ಗೂಬೆ ಕೂಡಿಸಿರುವುದು ಸರಿಯಲ್ಲವೆಂಬುದು ನನ್ನ ನಿಲುವಾಗಿದೆ.

ಯಾರ ಲಾಭಕ್ಕಾಗಿ ಈ ಸಮೀಕ್ಷೆ ?

ಕನ್ನಡದ ಒಂದು ಹೆಸರಾಂತ ದಿನಪತ್ರಿಕೆಯೆಂದು ತಮ್ಮನ್ನು ತಾವು ಕರೆದುಕೊಳ್ಳುವ ಕನ್ನಡ-ಪ್ರಭದವರು ಮೊನ್ನೆ ತಮ್ಮ ಪತ್ರಿಕೆಯ ಮುಖ-ಪುಟದಲ್ಲಿ "ತಾಯಿ ಕನ್ನಡತಿ, ಆದರೆ ಮಕ್ಕಳು...?" ಲೇಖನ ಮೂಡಿಸಿರುತ್ತಾರೆ. ಏನೀ ಲೇಖನ? ಕರ್ನಾಟಕದಲ್ಲಿ ಇವರು ಸಂದರ್ಶಿಸಿದ ಸುಮಾರು 6000 ಹೆಂಗಸರು (ತಾಯಂದಿರು) ತಮ್ಮ ಮಕ್ಕಳಿಗೆ ಒಳ್ಳೆಯ ಕಲಿಕೆ ಕೊಡಿಸಲು ಯಾವ ಭಾಷೆಯ ಮಾಧ್ಯಮವನ್ನು ಆಯ್ಕೆ ಮಾಡುತ್ತಾರೆ, ಮತ್ತೆ ಹಾಗೆ ಮಾಡಲು ಏನು ಕಾರಣಗಳು ಎಂಬ ಸಮೀಕ್ಷೆಯ ಫಲಿತಾಂಶ ಪ್ರಕಟಣೆ ಇದ್ದ ಹಾಗಿದೆ ಈ ಲೇಖನ.

ಇರಲಿ.. ಈ ಸಮೀಕ್ಷೆಯ ಕಡೆ ಗಮನ ಹರಿಸೋಣ. ಈ ಸಮೀಕ್ಷೆಯ ಕಾರ್ಯರೂಪ ನೋಡಿದರೆ ಬಹಳ ತಿಳಿಯಾಗಿ ಕಾಣುವ ವಿಷಯವೆಂದರೆ ಇವರು ಮೊದಲೇ ಒಂದು ಉತ್ತರವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದು, ಅದನ್ನು ಜನರ (ತಾಯಂದಿರ) ಬಾಯಿಗಳಿಂದಲೂ ಬರುವಂತಹ ಪ್ರಶ್ನೆಗಳನ್ನು ಬುದ್ದಿ ಉಪಯೋಗಿಸಿ ಅವರ ಮನಸ್ಸುಗಳಲ್ಲಿ ಅದನ್ನು ಬಿತ್ತುವ ಕೆಲಸ ಮಾಡಿರುವ ಹಾಗಿದೆ. ಈ ಪ್ರಶ್ನೆ ಎಲ್ಲರ ಮನಸ್ಸಲ್ಲೂ ಅಡಗಿಯೇ ಇದ್ದರೂ ಇದನ್ನು institutionalize ಮಾಡುವ ಹುನ್ನಾರ ಸುದ್ದಿ ಮಾಧ್ಯಮದವರಾದ ಇವರದ್ದಾಗಿದೆ.


ಸುದ್ದಿ ಮಾಧ್ಯಮದ ಜವಾಬ್ದಾರಿ ನಿಭಾಯಿಸುವ ಹೆಸರಿನಲ್ಲಿ ಇದ್ದದ್ದನ್ನು ಇರುವ ಹಾಗೇ ಹೇಳಿ ಮುಗಿಸಿದ್ದಾರೆ ಹೊರತು, ಅವರೇ ಹೇಳಿಕೊಳ್ಳುವ ಹಾಗೆ ಸಮಾಜದ ಏಳಿಗೆಗಾಗಿ, ಉಜ್ವಲ ಭವಿಷ್ಯದತ್ತ ಕೆಲಸ ಮಾಡುವ ಜವಾಬ್ದಾರಿ ಇಲ್ಲಿ ತೋರಿಸಿರುವ ಹಾಗೆ ಕಾಣುತ್ತಿಲ್ಲ. ಇಂದು ಕನ್ನಡ ಏಟು ತಿಂದಿರುವ ತಾಯಿ, ತನ್ನ ಮಕ್ಕಳಿಗೆ ಅನ್ನ ಉಣಿಸಲು ಅವಳಿಗೆ ಆಗುತ್ತಿಲ್ಲವೆಂಬುದನ್ನು ಬಿಡಿಸಿ-ಬಿಡಿಸಿ ಹೇಳುತ್ತಿದ್ದಾರೆ. ಆದರೆ ಈ ತಾಯಿಗೆ ಮಲಾಮು ಹಚ್ಚಿ, ವಯಸ್ಸಿಗಿಂತ ಮುಂಚೆ ಸಾಯದೇ ಇರುವ ಹಾಗೆ ನೋಡಿಕೊಳ್ಳಲು ಜನ ಮುಂದಾಗಬೇಕು (ಯಾವ ರೀತಿಯಲ್ಲಿ) ಎಂದು ಕನ್ನಡದ "ತಾಯಂದಿರಿಗೆ" ಕಿವಿ ಮಾತು ಹೇಳಬಹುದಿತ್ತಲ್ಲವೇ ಈ ಮಾಧ್ಯಮದವರು? ಬದಲಾಗಿ ನಿಮ್ಮ ತಾಯಿಯನ್ನು ಈಗಲೇ ತ್ಯಜಿಸಿ, ಮತ್ತೊಂದು ತಾಯಿಯನ್ನು "ದತ್ತು" ಪಡೆಯಲು ದಾರಿ ತೋರಿಸುತ್ತಿದ್ದಾರಲ್ಲ ಇವರು?


ತಾಯ್ನುಡಿ ಮಕ್ಕಳಿಗೆ ಅತ್ಯುತ್ತಮ ಕಲಿಕೆ ಕೊಡಿಸಬಲ್ಲದು - ಇದು ಜಗತ್ತಿಗೇ ತಿಳಿದ ನಿಜ. ಇನ್ನು ಮಗುವಿನ ತಾಯ್ನುಡಿ ಕನ್ನಡವೇ ಇರಲಿ, ತಮಿಳೋ ತೆಲುಗೋ ಯಾವುದೇ ಭಾರತೀಯ ಭಾಷೆ ಇರಲಿ, ಇಂದು ಆ ಮಾಧ್ಯಮದಲ್ಲಿ ಕಲಿಕೆ ಹೆಚ್ಚು ಮುಂದುವರೆದಿಲ್ಲ ಎಂಬುದು ಗೊತ್ತಿರುವ ವಿಷಯ ಮತ್ತು ಆಯಾ ಭಾಷೆಯ ಜನ ಸಾಧ್ಯವಾಗಿಸಬೇಕಾದ ವಿಷಯವೂ ಹೌದು. ಇನ್ನು ಯಾವುದೇ ಪತ್ರಿಕೆಯೊಂದರ "ಸಲಹೆ"ಯನ್ನು ಆಧರಿಸಿ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಯಾವ ಮಾಧ್ಯಮದ ಕಲಿಕೆ ಕೊಡಿಸಬೇಕು ಎಂಬುದನ್ನು ನಿರ್ಧರಿಸುವುದಿಲ್ಲ. ಆ ನಿರ್ಧಾರದ ಮೇಲೇನು ಈ ಪತ್ರಿಕೆಯ ಪ್ರಭಾವ ಇಲ್ಲದ ಮೇಲೆ, ಅನಾವಶ್ಯವಾಗಿ ಆ ವಿಚಾರದಲ್ಲಿ ಜನರನ್ನು ಮತ್ತೆ ಕೆಣಕುವ ಗುರಿಯೇನು? ಇವರಿಗೆ ಜನರ ಬಗ್ಗೆ ಕಾಳಜಿ ನಿಜವಾಗಿಯೂ ಇದ್ದರೆ ಅದನ್ನು long-term ಪರಿಹಾರಗಳತ್ತ ಕೈ-ಮಾಡುವ ಮೂಲಕ ತೋರಿಸಿದರೆ ಒಳಿತು. ಕನ್ನಡದ್ದೇ ಪತ್ರಿಕೆಯಾಗಿ ಇಂಗ್ಲಿಷ್ ಮಾಧ್ಯಮ ಕಲಿಕೆಯ ಸಲ್ಲದ ಗುಣಗಾನ ಮಾಡುವ ಮೂಲಕ ಜನರು ಇವರನ್ನು ನಂಬಬೇಕಾ ಎಂಬ ಪ್ರಶ್ನೆಗೆ ಸೊಪ್ಪು ಹಾಕಿದಂತಾಗಿದೆ, ಅಲ್ವಾ? ಇಂಗ್ಲಿಷ್ ಮಾಧ್ಯಮದ ಶಾಲೆಗಳು ಬೆಳೆಯುವುದಕ್ಕೂ ಕನ್ನಡ ದಿನಪತ್ರಿಕೆಯ ವ್ಯಾಪಾರ ಕುದುರುವುದಕ್ಕೂ ಸಂಬಂಧವೇನಾದರು ಕಂಡು ಕೊಂಡಿದ್ದಾರೆಯಾ ಈ ಪತ್ರಿಕೆಯವರು?


ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬದಲಾವಣೆ ಮೂಡಿಸಲು ಪತ್ರಿಕೆಗಳಿಗಿರುವ ಬಲ ಇವರುಗಳು ಅರ್ಥ ಮಾಡಿಕೊಂಡರೆ ಚಂದ. ಆ ದಿಕ್ಕಿನಲ್ಲಿ ಸಮಾಜದಲ್ಲಿ ಒಳ್ಳೆಯ ಬದಲಾವಣೆಗಳತ್ತ ದುಡಿಯುತ್ತಿರುವ ಕೈಗಳ ಬಲ ಇಮ್ಮಡಿಗೊಳಿಸುವ ಕೆಲಸವನ್ನಾದರೂ ಇವರು ಮಾಡಬಹುದಾಗಿದೆ.